ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
ಬಲ್ಲಿರೇನಯ್ಯ ಮಾಸ ಪತ್ರಿಕೆಯ ವಿದ್ಯುಕ್ತ ಲೋಕಾರ್ಪಣೆ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಶುಕ್ರವಾರ, ಜನವರಿ 31 , 2014
ಯಕ್ಷಲೋಕದ ಗೆಳೆಯ ಗೆಳತಿಯರ ಭಾವನೆಗಳ ರಂಗ ಸ್ಥಳ``ವೆಂದೇ ಹೆಜ್ಜೆ ಇಟ್ಟಿರುವ ಬಲ್ಲಿರೇನಯ್ಯದ ಕನಸು ಕಂಡವರು ಕಲಾವಿದ ವರ್ಕಾಡಿ ತಾರಾನಾಥ ಬಲ್ಯಾಯ. ಆಜ್ಞಾಸೋಹಂ ಪ್ರಕಾಶನದ ಮೂಲಕ ಬೆಳ್ಮಣ್ಣಿನಿಂದ ಪ್ರಕಟವಾಗುವ ``ಬಲ್ಲಿರೇನಯ್ಯ`` ಈಗಾಗಲೇ ಪ್ರಾಯೋಗಿಕವಾಗಿ 12 ಸಂಚಿಕೆಗಳನ್ನು ಹೊರತಂದಿದ್ದು, 3,000 ಚಂದಾದಾರರನ್ನು ಹೊಂದಿದೆ.

ಬಲ್ಲಿರೇನಯ್ಯದ ಮುಖ್ಯ ಸಂಪಾದಕರು ಕಲಾವಿದ ವರ್ಕಾಡಿ ತಾರಾನಾಥ ಬಲ್ಯಾಯ
``ಕೇಳಿ`` ಎಂಬ ಸಂಪಾದಕೀಯ, ಓದುಗರ ಸ್ಪಂದನಕ್ಕಾಗಿಯೇ ಮೀಸಲಾದ ``ಅಹೋ ದಕ್ಕಿತು``, ತಿಂಗಳ ಕಾರ್ಯಕ್ರಮದ ಪಕ್ಷಿನೋಟ ಬೀರುವ ``ಡಂಗುರ`` ಪುಟಗಳು ಅನನ್ಯವಾಗಿವೆ. ಪಾರಂಪರಿಕ ಯಕ್ಷಗಾನಗಳ ಪ್ರದರ್ಶನ,ಅಧ್ಯಯನ ವಿಷಯಗಳ ಬಗ್ಗೆ ವಿಮರ್ಶೆ ಪತ್ರಿಕೆ ಮೂಲಕ ನಡೆಯುತ್ತಿದೆ.

ಯಕ್ಷಗಾನದ ರಂಗಸ್ಥಳದಲ್ಲಿ ಬಣ್ಣ ಬಣ್ಣದ ಯಕ್ಷ ವೇಷಗಳು ಗೆಜ್ಜೆ ಕಟ್ಟಿ ಹೆಜ್ಜೆ ಇಟ್ಟು ಮರೆಯಾದರೂ, ಅವೆಲ್ಲ ವನ್ನು ನೆನಪಿನ ರಂಗಸ್ಥಳದಲ್ಲಿ ಕಟ್ಟಿ ಕೊಡುವ ಯಕ್ಷಗಾನ ಮಾಸಪತ್ರಿಕೆಗಳ ಅಕ್ಷರ ಕೈಂಕರ್ಯ ಸುಲಭದ ಮಾತಲ್ಲ. ನೋಂದಾವಣೆ, ಲೇಖನ-ಚಿತ್ರ ಸಂಗ್ರಹ, ಅಂಚೆ- ಸಂಚಿಕೆಗಳ ವಿತರಣೆ, ಮುದ್ರಾ ರಾಕ್ಷಸನ ಪೀಡೆ ಹೀಗೆ ಹತ್ತು ಹಲವು ನೋವುಗಳ ನಡುವೆಯೂ ಸಕಾಲದಲ್ಲಿ ನಮ್ಮನ್ನು ತಲುಪುವ ಹೊಣೆ ಹೊತ್ತ ಸಂಪಾದಕರದು ಆತ್ಯಂತಿಕ ಸುಖ ನೀಡುವ ಪ್ರಸವ ವೇದನೆ.

`` ಕಲಾವಿದರಲ್ಲಿ ಪತ್ರಿಕೆಗಳನ್ನು ಓದುವವರ ಸಂಖ್ಯೆ ಕಡಿಮೆ,ಅವರಿಗೆ ಪತ್ರಿಕೆ ಬಗ್ಗೆ ಅಭಿರುಚಿ ಮೂಡಿಸುವ ಉದ್ದೇಶವನ್ನೊಂದಿದೆ. ಯಕ್ಷಗಾನ ಕಲಾಭ್ಯಾಸಿಗಳಿಗೆ ಅನುಕೂಲವಾಗುವ ಪ್ರಸಂಗಗಳ ಧಾರಾವಾಹಿಯನ್ನು ಪ್ರಕಟಿಸಲಾಗುವುದು. ತೆಂಕು, ಬಡಗು, ಬಡಾಬಡಗು ಅಲ್ಲದೇ ಕರ್ನಾಟಕದ ಬಯಲಾಟಗಳ ಪರಂಪರೆಯನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಪತ್ರಿಕೆಯನ್ನು ಹೊರತರಲಾಗಿದೆ`` - ಸಂಪಾದಕ ತಾರಾನಾಥ ವರ್ಕಾಡಿ

ಬಲ್ಲಿರೇನಯ್ಯ ಮಾಸ ಪತ್ರಿಕೆಯ ವಿದ್ಯುಕ್ತ ಲೋಕಾರ್ಪಣೆ, ಇದೇ ಶನಿವಾರ ಬೆ೦ಗಳೂರಿನಲ್ಲಿ ನಡೆಯಲಿದೆ. ಯಕ್ಷಗಾನದ ಸಮಗ್ರ ಮಾಹಿತಿ ಈ ಪತ್ರಿಕೆಯ ಮೂಲಕ ಎಲ್ಲಾ ಕಲಾಭಿಮಾನಿಗಳಿಗೂ ತಲುಪಲಿ ಎ೦ಬುದು “ಬಯಲಾಟ“ದ ಹಾರೈಕೆ.

ಸಮಾರ೦ಭದ ಆಮ೦ತ್ರಣ ಪತ್ರಿಕೆ








Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
vasant raj, Abudhabi.(5/27/2015)
Very good effort....Mr. Varkady and Team...hope you will help the Old Yakshagana Artist who are sick and helpless. Try the best to give time-time details of yakshagana news...all the very best to your team....Yakshagaanam Gelge....Yakshagaanam baalge....
Narayana Thoranagandi(10/22/2014)
I really appreciate your article about Mr. Sanjay Kumar & his achievements in yakshagana. please extend your work about other well known artistes.
Taranatha vorkady,Dr.Premalatha(3/3/2014)
dear sir, thank you for encouraging us. To subscribe BALLIRENAYYA monthly magazine please contact us- 9448863875, 9449714612, 08258 274775
Lakshminarayana(2/7/2014)
How to become a subscriber to Ballirenayyya ?




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ